ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಕೋಟ ಅಮೃತೇಶ್ವರಿ ಮೇಳ ಇಂದು ತಿರುಗಾಟ ಆರಂಭ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಮ೦ಗಳವಾರ, ನವ೦ಬರ್ 18 , 2014
ನವ೦ಬರ್ 18, 2014

ಕೋಟ ಅಮೃತೇಶ್ವರಿ ಮೇಳ ಇಂದು ತಿರುಗಾಟ ಆರಂಭ

ಕೋಟ : ಪ್ರಸ್ತುತ ವರ್ಷದ ಕೋಟ ಅಮೃತೇಶ್ವರೀ ಮೇಳವು ನ. 18ರಂದು ಮಂಗಳವಾರ ತಿರುಗಾಟ ಆರಂಭಿಸಲಿದೆ. ಬೆಳಗ್ಗೆ ಗಣಪತಿ ಪೂಜೆ ನಡೆಯಲಿದೆ. ರಾತ್ರಿ ಜರುಗುವ ಪ್ರಥಮ ದೇವರ ಸೇವೆ ಯಾಟದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಆನಂದ ಸಿ. ಕುಂದರ್ ಅವರ ಅಧ್ಯಕ್ಷತೆಯಲ್ಲಿ ಹಿರಿಯ ಯಕ್ಷಗಾನ ಕಲಾವಿದರಾದ ಹಾರಾಡಿ ಸರ್ವ ಗಾಣಿಗ, ಮಂದಾರ್ತಿ ಎಂ.ಎ ನಾಕ್ ಅವರಿಗೆ ಸನ್ಮಾನ ನಡೆಯಲಿದೆ. ಸಾಲಿಗ್ರಾಮ ಮಕ್ಕಳ ಮೇಳದ ಸಂಚಾಲಕ ಎಚ್.ಶ್ರೀಧರ ಹಂದೆ ಆಶಯದ ನುಡಿಗಳ ನ್ನಾಡಲಿದ್ದಾರೆ.

ಅಮೃತೇಶ್ವರೀ ಕ್ಷೇತ್ರ ಮಹಾತ್ಮೆ, ಸಂಪೂರ್ಣ ದೇವಿ ಮಹಾತ್ಮೆ ಹಾಗೂ ಇನ್ನಿತರ ಪೌರಾಣಿಕ ಮತ್ತು ನೂತನ ಪ್ರಸಂಗಗಳು ಪ್ರದರ್ಶನಗೊಳ್ಳಲಿದೆ. ಭಾಗವತ ಹೇರಂಜಾಲು ಗೋಪಾಲ ಗಾಣಿಗ, ಹಿರಿಯ ಕಲಾವಿದರಾದ ಆರ್ಗೋಡು ಮೋಹನದಾಸ್ ಶೆಣೈ, ಕೋಟ ಸುರೇಶ್, ಚಿಟ್ಟಾಣಿ ನರಸಿಂಹ ಹೆಗ್ಡೆ ಮೊದಲಾದವರ ಕೂಡುವಿಕೆಯಿಂದ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಜನವರಿಯಲ್ಲಿ ದೇವಳ ಸಂಪೂರ್ಣ ನವೀಕರಣಗೊಳ್ಳಲಿದ್ದು, ಜ. 7ರಂದು ನೂತನ ಶಿಲಾಮಯ ದೇಗುಲದ ಪುನರ್ ಪ್ರತಿಷ್ಠೆ, ಜ. 9ರಂದು ಬ್ರಹ್ಮಕಲಶಾಭಿಷೇಕ, ಮಹಾ ಅನ್ನ ಸಂತರ್ಪಣೆ, ಜ. 10ರಂದು ಗೆಂಡ ಸೇವೆ, ಜ. 11ರಂದು ತುಲಾಭಾರ ಸೇವೆ ಜರುಗಲಿದೆ.

ಮೇಳಕ್ಕೆ ಹೊಸ ಗಣಪತಿ ಮೂರ್ತಿ:ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ ಸಿ. ಕುಂದರ್ ಅವರು ದಾನಿಗಳ ಸಹಕಾರ ಪಡೆದು, ಉಳಿದ ಹಣವನ್ನು ತಾವೇ ಹಾಕಿ ಮೇಳಕ್ಕೆ ಹೊಸ ಗಣಪತಿ ಮೂರ್ತಿಯನ್ನು ಸುಮಾರು 3 ಲಕ್ಷದ 75 ಸಾವಿರ ರೂ. ವೆಚ್ಚದಲ್ಲಿ ಒದಗಿಸಿದ್ದಾರೆ. ಅದು ದೇವರ ಪ್ರಥಮ ಸೇವೆಯಾಟದ ದಿನ ಮೇಳಕ್ಕೆ ಹಸ್ತಾಂತರಗೊಳ್ಳಲಿದೆ. ಈ ಮೂರ್ತಿ 3.5 ಅಡಿ ಎತ್ತರವಿದ್ದು, ಬೆಳ್ಳಿ ಮತ್ತು ಹಲಸಿನ ಮರ ಬಳಸಿಕೊಳ್ಳ ಲಾಗಿದೆ. 3.546 ಕೆ.ಜಿ ತೂಕದ ಬೆಳ್ಳಿ ಯನ್ನು ಮೂರ್ತಿಗೆ ಬಳಸಿಕೊಳ್ಳಲಾಗಿದೆ.

ಕೃಪೆ : http://www.vijaykarnataka.com


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ